ಮಿಂಚಾಗಿ ನೀನು ಬರಲು
ಮುಂಗಾರು ಮಳೆ ಜಯಂತ್ ಕಾಯ್ಕಿಣಿ
ಮನೋ ಮೂರ್ತಿ
ಮಿಂಚಾಗಿ ನೀನು ಬರಲು ನಿಂತಲ್ಲಿಯೆ ಮಳೆಗಾಲ
ಬೆಚ್ಚಗೆ ನೀ ಜೋತೆಗಿರಲು ಕೂತಲ್ಲಿಯೆ ಛಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ || ಪ ||
ನಾ ನಿನ್ನ ಕನಸಿಗೆ ಚಂದಾದರನು
ಚಂದಾ ಬಾಕಿ ನೀಡಲು ಬಂದೆ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೆ ಮಾತೆ ಮರೆವೆನು
ಕ್ಷಮಿಸು ನೀ ಕಿನ್ನರಿ ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು || ೧ ||
ನಿನ್ನ ಮನದ ಕವಿತೆ ಸಾಲ ಪಡೆವನಾನು ಸಾಲಗಾರ
ಕಣ್ಣ ತೆರೆದು ದೋಚಿಕೊಂಡ ನೆನುಪುಗಳಿಗೆ ಪಾಲುದಾರ
ನನ್ನದೀ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು || ೨ ||
ಮುಂಗಾರು ಮಳೆ
ಚಿತ್ರ ನೋಡಿ